"ಯುಪಿಎಸ್ಸಿ" ಯಲ್ಲಿ ಉತ್ತಮವಾದ ರ‍್ಯಾಂಕ್ ಗಳಿಸುವುದಕ್ಕೆ ಕನ್ನಡ ಸಾಹಿತ್ಯ ಐಚ್ಛಿಕ ವಿಷಯು ಯಾವಾಗಲೂ ಮೈಲಿಗಲ್ಲನ್ನು ಸಾಧಿಸಿದೆ. ಗರಿಷ್ಠವಾದ ಅಂಕಗಳನ್ನು ಗಳಿಸುವುದಕ್ಕೆ ಬಹುಮುಖ್ಯವಾಗಿ ಬೇಕಿರುವುದು, ಬರವಣಿಗೆಯಲ್ಲಿ ವೇಗ, ವಿಷಯದಲ್ಲಿ ಅರ್ಥವಂತಿಕೆ ಮತ್ತು ಪ್ರಸ್ತುತಿ ಪಡಿಸುವ ವಿಧಾನ.
ನುಡಿದರೆ ಮುತ್ತಿನ ಹಾರದಂತಿರಬೇಕು ಬಸವಣ್ಣನವರ ವಚನದ ಸಾಲುಗಳಂತೆ ಪರೀಕ್ಷೆಯ ತಯಾರಿಯು ಸಮಗ್ರತೆಯಿಂದ ಕೂಡಿರಬೇಕು ಬರೆದರೆ ಗರಿಷ್ಠವಾದ ಅಂಕಗಳನ್ನು ಗಳಿಸುವಂತಿರಬೇಕು, ಅದರ ಪೂರ್ವ ಸಿದ್ಧತೆಗಾಗಿ ಹೆಚ್ಚು ಹೆಚ್ಚು ಉತ್ತರಗಳನ್ನು ಬರೆದು ಮೌಲ್ಯಮಾಪನದ ಜೊತೆಗೆ ಮಾರ್ಗದರ್ಶನವನ್ನು ಪಡೆದರೆ ಸಫಲತೆಯನ್ನು ಪಡೆಯಬಹುದು.
2022 ರ ಸಾಲಿನ ಕನ್ನಡ ಸಾಹಿತ್ಯ ಐಚ್ಚಿಕ ವಿಷಯದೊಂದಿಗೆ ನಮ್ಮ ಸಾಧಕರಾದ ಧಾಮಿನಿ ಎಂ ದಾಸ್(345), ತನ್ಮಯ್ ಎಂ ಎಸ್(690) ಮತ್ತು ಪದ್ಮನಾಭ ಎಚ್ ಎಸ್(923) ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕನ್ನಡ ಸಾಹಿತ್ಯದ ಐಚ್ಚಿಕ ವಿಷಯದ ಸರಿಣಿ ಪರೀಕ್ಷಾ ಸೆಪ್ಟೆಂಬರ್ 5 ರಿಂದ ಪ್ರಾರಂಭವಾಗಲಿದೆ
ಪರೀಕ್ಷಾ ಸರಣಿಯ ವಿಶೇಷತೆಗಳು
ಉತ್ತರಗಳ ಆಕಾರ, ಪ್ರಸ್ತುತಿ, ವಿಷಯದ ಅರಿವು ಮತ್ತು ಸ್ವಂತಿಕೆಯ ವೃದ್ಧಿಗೆ ಆದ್ಯತೆ
ಪರಿಣಾಮಕಾರಿಯಾದ ಉತ್ತರಗಳ ಸಿದ್ಧತೆಗೆ ಪ್ರಶ್ನೋತ್ತರಗಳ ಚರ್ಚೆ ಮತ್ತು ಮಾದರಿ ಉತ್ತರಗಳು
ಸಿಂಹಾವಲೋಕನ ತರಗತಿಗಳು
ಗರಿಷ್ಠವಾದ ಅಂಕಗಳನ್ನು ಸಂಪಾದಿಸಲು ಅಗತ್ಯವಾದ ಉತ್ತರಕ್ರಮದ ರೂಪುರೇಷೆಗಳು
ಅಗತ್ಯವಾದ ವೈಯಕ್ತಿಕ ಮಾರ್ಗದರ್ಶನ
ಪರೀಕ್ಷೆಯ ವಿವರಗಳು
12 ಪರೀಕ್ಷೆಗಳು, 10 ಕಿರು ಪರೀಕ್ಷೆಗಳು ಮತ್ತು 2 ಸಮಗ್ರ ಪರೀಕ್ಷೆಗಳು
Test Series - ₹7500/-